Sunday, February 26, 2012

ಅಪ್ಪ...ಕೇಳಿಸ್ತಿದ್ಯಾ...?


 
ಈ ಕಂಗಳಿಗೊಂದು ಮನವಿ....
ಮನಸ್ಸು ಮಲಗಿದ್ದರೂ ..ನೀವು ತೆರೆಯಬೇಡಿ
ಈ ಕನಸು ಮುಗಿಯದಿರಲಿ....

ನನ್ನ ನೆನಪಾಗುತ್ತಿಲ್ಲವೇ.......?
ನೀವು ಕೋಪಿಸಿಕೊಂಡಂತೆ...ಎಲ್ಲೋ ಹೊರಟಂತೆ ....
ನಾನು ನಿಮ್ಮ ಮನ ಒಲಿಸಲು ಬಂದಂತೆ,
ಒಂದು ಕನಸು!

ಅನುದಿನ ಹುಡುಕುತಿವೆ ಈ ಕಂಗಳು ನಿಮ್ಮನ್ನು.....
ನಡೆದು ನಡೆದು..ಪ್ರತಿ ಹೆಜ್ಜೆಗೂ ....ನಿಮ್ಮ ನೆನಪು............,
ನನ್ನನು ಕರೆದೊಯ್ಯಲು ಅಪ್ಪ ಬರಲಿಲ್ಲವೇಕೆ?

ಬೆಳಕು ಹರಿಯಿತು...ಕನಸು ಮುಗಿಯಿತು 
ಕಣ್ ತೆರೆದಂತೆ  ಕಣ್ಣೀರ ಸಾಗರವಾಗಿದೆ................ಈ ಮನ,
ನೀವಿಲ್ಲದ ಮನೆ..
ಎಂದಿನಂತೆ ಹೊಸದಿನ ..ಆದರೂ ನಿಲ್ಲದು ಮನದಲಿ ಈ ಆಕ್ರಂದನ......


                                                      ಇಂತಿ..
                                                                                          ನಿಮ್ಮ ಪ್ರೀತಿಯ ಮಗಳು..

3 comments:

  1. ಭಾವನೆಗಳನ್ನು ಕಟ್ಟಿದ ರೀತಿ ಮತ್ತು ಅಪ್ಪನ ಪ್ರೀತಿಯ ಕನಸುಗಳು .. ಅತೀ ಸೊಗಸಾಗಿ ಕವಿತೆಯಲ್ಲಿ ಜೀವ ತುಂಬುವ ಅಂಶಗಳು .. ಆದರೆ ಅಲ್ಲಲ್ಲಿ ಅಕ್ಷರ ಲೋಪದೋಷಗಳು .. ಅದನ್ನು ಸರಿಪಡಿಸಿಕೊಳ್ಳಬೇಕು.. :)

    ReplyDelete
  2. ನಿಮ್ಮಲ್ಲಿ ಬರೆಯಬಲ್ಲ ಅಂತಃಸತ್ವವಿದೆ, ಅದಕ್ಕಾಗಿ ನನ್ನ ಅಭಿನಂದನೆಗಳು.. ಒಂದಷ್ಟು ಭಾಷೆ ಶುದ್ಧವಾಗಬೇಕು ಮತ್ತು ಲಯ ಕೂರಬೇಕು.. ಆದರೂ ಕನ್ನಡದಲ್ಲಿ ಬರೆಯಬೇಕೆಂಬ ನಿಮ್ಮ ಪ್ರೀತಿಗೆ ಭೇಷ್ ಹೇಳಲೇ ಬೇಕು.. ಹಿರಿಯ ಸಾಹಿತಿಗಳ ಕವಿತೆಗಳನ್ನು ಓದಿ, ಮನನ ಮಾಡಿಕೊಂಡು ಮುಂದಿನ ಪ್ರಯತ್ನಗಳಿಗೆ ಅಡಿಯಿಡಿ.. ಶುಭವಾಗಲಿ..:)))

    ReplyDelete
  3. ತಂದೆಗಾಗಿ ಮಗಳು ಬರೆಯಬಲ್ಲ ಅತ್ಯಂತ ಪ್ರೀತಿ ತುಂಬಿದ ಬರಹ..."ಎಂದಿನಂತೆ ಹೊಸದಿನ ..ಆದರೂ ನಿಲ್ಲದು ಮನದಲಿ ಈ ಆಕ್ರಂದನ""..ಹೌದು..ಭಾವಗಳ ಬದುಕೇ ಹೀಗೆ. ನೋವಲ್ಲೂ ನಗುತ ಬದುಕುವ ವಿಪರ್ಯಾಸ ...
    Nice write up :)

    ReplyDelete